Search

ಮಹಿಳಾ ಸಬಲೀಕರಣಕ್ಕೆ ಈ ಆಯವ್ಯಯವು ಪೂರಕವಾಗಬಹುದೇ?

In review

– ಪೂರ್ಣಿಮ, ಜಿ.ಆರ್. ಪ್ರೋಗ್ರಾಂ ಆಫೀಸರ್, ಪಬ್ಲಿಕ್ ಅಫೇರ್ಸ್ ಸೆಂಟರ್

‘ಯಾವುದೇ ರಾಜ್ಯದ ಸಮಗ್ರ ಅಭಿವೃದ್ಧಿಯು ಮಹಿಳಾ ಸಬಲೀಕರಣದಿಂದ ಸಾಧ್ಯ’ ಎಂದು ಹೇಳುವುದರೊಂದಿಗೆ ಲಿಂಗ ಸಮಾನತೆಯ ಆಯವ್ಯಯವನ್ನು ಮಂಡಿಸಿದ ಸನ್ಮಾನ್ಯ ಮುಖ್ಯಮಂತ್ರಿಗಳಿಗೆ ಅಭಿನಂದಿಸುತ್ತಾ, ಸರ್ಕಾರವು ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿಗಾಗಿ ನೀಡಿದ ಕೊಡುಗೆಗಳ ಒಂದು ಸಣ್ಣ ಚಿತ್ರಣವನ್ನು ಮೆಲುಕು ಹಾಕಬಹುದು. ರಾಜ್ಯ ಸರ್ಕಾರಗಳು ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರಗಳಲ್ಲಿ ಒದಗಿಸಿರುವ ಸೇವೆಗಳು ಅಶಕ್ತವಾಗಿದೆ ಎಂದು ಇತ್ತೀಚಿನ ಆರ್ಥಿಕ ಸಮೀಕ್ಷೆಯ ವರದಿಯು ತಿಳಿಸಿದೆ. ಹಾಗೆಯೇ ಕರ್ನಾಟಕ ರಾಜ್ಯದಲ್ಲಿ 15 ರಿಂದ 49 ವಯಸ್ಸಿನ ಶೇ.62.5 ರಷ್ಟು ಸಾಮಾನ್ಯ ಮಹಿಳೆಯರು ಮತ್ತು ಶೇ.64.5 ರಷ್ಟು ಗರ್ಭಿಣಿ ಮಹಿಳೆಯರು ರಕ್ತಹೀನತೆಯಿಂದ ಬಳಲುತ್ತಿದ್ದಾರೆ ಎಂಬುದನ್ನು 2015ರ ಇಂಡಿಯಾ ಹೆಲ್ತ್ ರಿಪೋರ್ಟ್ ವರದಿ ಮಾಡಿದೆ. ಇದಕ್ಕೆ ಕಾಕತಾಳೀಯವೆಂಬಂತೆ ಮಾನ್ಯ ಮುಖ್ಯಮಂತ್ರಿಗಳು ಗರ್ಭಿಣಿ ಮತ್ತು ಬಾಣಂತಿ ಮಹಿಳೆಯರ ಪೌಷ್ಠಿಕಾಂಶ ಕೊರತೆಯನ್ನು ನಿವಾರಿಸಲು ರಾಜ್ಯದ ಎಲ್ಲಾ 30 ಜಿಲ್ಲೆಗಳಿಗೂ ‘ಮಾತೃ ಪೂರ್ಣ’ ಯೋಜನೆಯನ್ನು ವಿಸ್ತರಣೆ ಮಾಡಿದ್ದು, ಜುಲೈ ತಿಂಗಳಿನಿಂದ ಸಿದ್ಧಪಡಿಸಿದ ಬಿಸಿಯೂಟ ಜಾರಿಗೆ ಬರಲಿದ್ದು ಇದಕ್ಕಾಗಿ 302 ಕೋಟಿ ರೂಗಳನ್ನು ವೀಸಲಿಟ್ಟಿದ್ದಾರೆ. ಹಾಗೆಯೇ ಎಲ್ಲಾ ಅಂಗನವಾಡಿಯ ಮಕ್ಕಳಿಗೆ ಮುಂದಿನ ಜೂನ್ ತಿಂಗಳಿನಿಂದ ವಾರದಲ್ಲಿ ಎರಡು ಮೊಟ್ಟ ನೀಡಲು ರೂ.47ಕೋಟಿಯನ್ನು , ಕ್ಷೀರ ಭಾಗ್ಯ ಯೋಜನೆಯಡಿಯಲ್ಲಿ ಮಕ್ಕಳಿಗೆ ನೀಡುವ ಹಾಲನ್ನು 3 ರಿಂದ 5 ದಿನಗಳಿಗೆ ಹೆಚ್ಚಳ ಮಾಡಿರುವುದು ರಾಜ್ಯ ಸರ್ಕಾರವು ಮಹಿಳೆ ಮತ್ತು ಮಕ್ಕಳಲ್ಲಿ ಕಂಡುಬರುವ ಅಪೌಷ್ಠಿಕತೆಯನ್ನು ಹೋಗಲಾಡಿಸುತ್ತಾ ಹೆಜ್ಚೆ ಇಟ್ಟಿರುವುದನ್ನು ಕಾಣಬಹುದು. ಮಕ್ಕಳ ಸೇವೆಗಳಲ್ಲಿ ಕಾರ್ಯನಿರತರಾಗಿರುವ ಅಂಗನವಾಡಿ ಕಾರ್ಯಕರ್ತೆಯರ ಗೌರವಧನವನ್ನು ಹೆಚ್ಚಿಸುವುದರ ಜೊತೆಗೆ ಸರ್ಕಾರದಿಂದ ಅಪಘಾತ ವಿಮೆಯನ್ನು ಜಾರಿಗೊಳಿಸಿರುವ ಬಗ್ಗೆ ತಿಳಿಸಿರುವುದು ಬಹಳ ಸಂತಸದ ವಿಷಯ. ಮಹಿಳೆಯ ರಕ್ಷಣೆಗೆ ಮುಂದಾಗಿ ಅತ್ಯಾಚಾರ ಮತ್ತು ವಿವಿಧ ದೌರ್ಜನ್ಯಗಳಿಗೊಳಗಾದ ಮಹಿಳೆಯರು ಮತ್ತು ಮಕ್ಕಳಿಗೆ ವಿಶೇಷ ಚಿಕಿತ್ಸೆ ನೀಡಲು ಆರೋಗ್ಯ ಇಲಾಖೆಯ ಸಹಯೋಗದೊಂದಿಗೆ 145 ತಾಲ್ಲೋಕು ಆಸ್ಪತ್ರೆಗಳಲ್ಲಿ ಮುಂದಿನ 2 ವರ್ಷಗಳಲ್ಲಿ ವಿಶೇಷ ಚಿಕಿತ್ಸಾ ಘಟಕಗಳನ್ನು ಸ್ಥಾಪನೆ ಮಾಡುವುದಾಗಿ ಬರವಸೆ ನೀಡಿದ್ದಾರೆ. ಇದೊಂದು ಪ್ರಮುಖ ಮಹಿಳಾಪರ ಯೋಜನೆಯಾಗಲಿದ್ದು ಇದನ್ನು ಸೂಕ್ತ ರೀತಿಯಲ್ಲಿ ಜಾರಿಗೊಳಿಸಿ ತುರ್ತು ಸೇವೆಯನ್ನು ಒದಗಿಸುವುದರ ಜೊತೆಗೆ ಸ್ನೇಹಪೂರಕ ಸಿಬ್ಬಂದಿಗಳನ್ನು ಒದಗಿಸು ನಿಟ್ಟಿನಲ್ಲಿ ಯೋಜನೆಯನ್ನು ಕಾರ್ಯರೂಪಕ್ಕೆ ತರಬೇಕಾಗಿದೆ.

ಮಹಿಳೆಯರನ್ನು ಆರ್ಥಿಕವಾಗಿ ಸಬಲೀಕರಣಗೊಳಿಸುವ ನಿಟ್ಟಿನಲ್ಲಿ ಜಿಲ್ಲಾ ಸ್ತ್ರೀ ಶಕ್ತಿ ಒಕ್ಕೂಟಗಳ ಮೂಲಕ ಎಲ್ಲಾ 30 ಜಿಲ್ಲೆಗಳಲ್ಲಿ “ಸವಿರುಚಿ” ಸಂಚಾರಿ ಕ್ಯಾಂಟೀನ್‍ಗಳ ಪ್ರಾರಂಭಿಸಲು, ‘ಪರಿಕರ ಸಹಾಯಧನ ಯೋಜನೆಯಡಿ ಮಹಿಳೆಯರು ಸ್ವತ: ಅಥವಾ ಜಂಟಿಯಾಗಿ ನಡೆಸುತ್ತಿರುವ 10,000 ನ್ಯಾಯಬೆಲೆ ಅಂಗಡಿಗಳಿಗೆ ರೂ.5000 ಗಳ ಘಟಕ ವೆಚ್ಚದಲ್ಲಿ ಅಗತ್ಯ ಸಲಕರಣೆಗಳ ಖರೀದಿ ಮತ್ತು ಪೂರೈಕೆಗೆ ಒತ್ತು ನೀಡಿರುವುದು ಮಹಿಳೆಯರಲ್ಲಿ ಆರ್ಥಿಕ ಸ್ವಾವಲಂಬನೆ ತರಲು ಮುಂದಾಗಿದೆ. ದೇವದಾಸಿ ಪದ್ಧತಿಯಿಂದ ಹೊರಬಂದ ಮಹಿಳೆಯಳಿರಿಗೆ, ಲೈಂಗಿಕ ಕಾರ್ಯಕರ್ತರು ಮತ್ತು ಲಿಂಗತ್ವ ಅಲ್ಪಸಂಖ್ಯಾತರ ಪ್ರೋತ್ಸಾಹ ಧನವನ್ನು ಪರೀಕ್ಷರಣೆ ಮಾಡಿರುವುದು ದುರ್ಭಲ ವರ್ಗದ ಮಹಿಳೆಯರು ಸಮಾಜದ ಮುಖ್ಯವಾಹಿನಿಗೆ ಬರಲು ಪ್ರೋತ್ಸಾಹಿಸಿದಂತಾಗಿದೆ.

ರಾಜ್ಯ ಸಿವಿಲ್ ಸೇವೆಗಳಲ್ಲಿ ಸೇವೆಯನ್ನು ಸಲ್ಲಿಸುವ ಮಹಿಳಾ ಮೀಸಲಾತಿಯನ್ನು ಶೇ.30 ರಿಂದ 33ಕ್ಕೆ ಹೆಚ್ಚಿಸಿರುವುದು ಆಡಳಿತವರ್ಗದಲ್ಲಿ ಮಹಿಳೆಯರ ಪ್ರತಿನಿಧಿತ್ವವನ್ನು ಹೆಚ್ಚಿಸಲು ಸಹಕಾರಿಯಾಗಿದೆ.

ಬೆಂಗಳೂರು ಹಾಗೂ ಮಹಾನಗರ ಪಾಲಿಕೆ ವ್ಯಾಪ್ತಿಗಳಲ್ಲಿ ದುಡಿಯುವ ಮಹಿಳೆಯರಿಗಾಗಿ ತಲಾ 2 ಕೋಟಿ ರೂ ವೆಚ್ಚದಲ್ಲಿ 10 ಉದ್ಯೋಗಸ್ಥ ಮಹಿಳಾ ವಸತಿ ನಿಲಯವನ್ನು ಪ್ರಾರಂಭಿಸುವ ಉದ್ದೇಶವು ಬಹಳ ಸ್ವಾಗರ್ತಾಹ,

ಸೃಜನಶೀಲ ಸಾಹಿತ್ಯ ಪ್ರಕಾರದಲ್ಲಿ ಮಕ್ಕಳ ಪ್ರತಿಭೆಯ ಪ್ರೋತ್ಸಾಹ, ಉದಯೋನ್ಮುಖ ಬರಹಗಾರರ ನೆರವಿಗೆ, ಮಕ್ಕಳು ಎದುರಿಸುತ್ತಿರುವ ಸವಾಲುಗಳು ಮತ್ತು ಸಮಸ್ಯೆಗಳ ಕುರಿತಾದ ರಂಗ ನಾಟಕಗಳ ರಚನೆಗೆ 3 ಕೋಟಿ ರೂ.ವೆಚ್ಚದಲ್ಲಿ ವೇದಿಕೆ ಸೃಷ್ಟಿಸುವ ಕಾರ್ಯ ಸ್ವಾಗರ್ತವಾಗಿದ್ದು, ಇವುಗಳನ್ನು ಪ್ರೋತ್ಸಾಹಿಸಲು ಪೂರಕ ವ್ಯವಸ್ಥೆಯನ್ನು ಮಾಡುವ ಅಶ್ಯಕತೆ ಇದೆ. ಹಾಗೆಯೆ ಪ್ರಚಲಿತವಿರುವ ಜನಪರ ಯೋಜನೆಗಳನ್ನು ಮುಂದುವರಿಸಿರುವುದು ನಾಗರಿಕರಲ್ಲಿ ಸಂತಸ ತಂದ ವಿಷಯ.

ಪಬ್ಲಿಕ್ ಅಫೇರ್ಸ್ ಸೆಂಟರ್ ಮಹಿಳಾ ಮತ್ತು ಮಕ್ಕಳಾ ಅಭಿವೃದ್ಧಿ, ಲಿಂಗ ಸಮಾನತೆಯ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದ್ದು ಸರ್ಕಾರವು ಹೊರ ತಂದಿರುವ ಹೊಸ ಯೋಜನೆಗಳ ಬಗ್ಗೆ ಹರ್ಷವ್ಯಕ್ತ ಪಡಿಸುತ್ತದೆ. ಹಾಗೆಯೇ ಯಾವುದೇ ಜನಪರ ಯೋಜನೆಗಳನ್ನು ಘೋಷಣೆ ಮಾಡುವುದು ಸುಲಭವಾಗಿದ್ದು ಆದರೆ ಅದನ್ನು ಅನುಷ್ಠಾನಗೊಳಿಸಿ ನಿಗಧಿತ ಫಲಾನುಭವಿಗಳಿಗೆ ತಲುಪಿಸುವ ಕಾರ್ಯವನ್ನು ಮಾಡುವುದು ಬಹಳ ದೊಡ್ಡ ಸವಾಲಾಗಿದೆ! ಈ ನಿಟ್ಟಿನಲ್ಲಿ ನಾಗರಿಕರು ಪ್ರತಿ ಹಂತದಲ್ಲಯೂ ಮೇಲ್ವಿಚಾರಣೆ ಮಾಡಿ ಯೋಜನೆಗಳ ಅನುಷ್ಠಾನದತ್ತಾ ಕಣ್ಣಿಡಬೇಕು.

Please follow and like us:Leave a Reply

Your email address will not be published. Required fields are marked *

Facebook
Twitter
YOUTUBE
LINKEDIN